Sunday, January 17, 2010

The WaitT!

ಎನಗೆ ನಿನ್ನ ಮೇಲೆ ಏಕೆ ಅಷ್ಟೊಂದು ಪ್ರೀತಿ
ಒಮ್ಮೆಯೂ ನೋಡಿಲ್ಲ ನಿನ್ನ, ನಿನ್ನ ನೋಡಲು ಕಾಯಲೆಬೇಕಂತು ಪ್ರಕೃತಿ

ಹಗಲಿರುಳು ನಿನ್ನ ಜೊತೆಯಲೇ ಇರುವೆ ಅಪರಿಚಿತರಲ್ಲ ನಾವು
ಸನಿಹವಿದ್ದರು ಮನದಲಿ ಪ್ರಶ್ನೆಗಳು ಹತ್ತು ಹಲವು

ನನ್ನ ಭಾಷೆ ನೀ ತಿಳಿಯೆ ನಿನ್ನ ಭಾಷೆ ನಾ ಅರಿಯೆ ಆದರೂ ಅರ್ಥವಾಗುತಿಹುದು ಎಲ್ಲವೂ
ದಿನ ಕಳೆದಂತೆ ಹೆಚ್ಚುತಿಹುದು ಪ್ರೀತಿ......... ಕಾಡುತಿಹುದು ಕಾತುರವು

ನನ್ನ ಕನಸಿನ ಅರಮನೆಯ ಬೆಳಗಿತು ನಿನ್ನ ಮುಗ್ಧ ಕಿರುನಗೆಯ ಕಲ್ಪನೆ
ನಿನಗೂ ನನ್ನ ಮೇಲೆ ಪ್ರೀತಿ ಹೆಚ್ಚಾಗಲು... ಹಿತವಾಗಿ ಸ್ಪರ್ಶಿಸುವೆ ಮೆಲ್ಲನೆ

ಅಷ್ಟು ಬೇಗನೆ ಎಂತಹ ಭಾವನಾತ್ಮಕ ಬಂಧ ....ಈ ಸಂಬಂಧವೇ ಅಚ್ಚರಿ !!
ನಾ ನಿನಗೆ ಜನ್ಮ ಕೊದುತಿರುವೆ ಅಷ್ಟೇ... ನೀ ಕೊಡುತಿರುವ ಉಡುಗೊರೆ ನನ್ನ ತಾಯ್ತನದ ಸಿರಿ :)

4 comments:

  1. ಬಹಳ ಚೆನ್ನಾಗಿದೆ ಗುರು...ತಾಯಿ-ಮಗುವಿನ ನಡುವಿನ ನಂಟನ್ನು ಚೆನ್ನಾಗಿ ಬರೆದಿದ್ದೀಯಾ..ಹೀಗೆ ಬರೀತಿರು..

    ReplyDelete
  2. Sooper! thumbha channagidhe!

    ReplyDelete
  3. I can relate to it so well, Keerthy. Aascharya andre, neevu (being a guy) ee bhavanegalanna artha maaDkonDirodu! Tumba hitavagide padya :)
    Nimma anumati iddre, ee padyada kelavu saalugaLannu naanu maaDta iruva 'baby book' nalli upayogisoNa anta. 'Baby book' is a record of all the small, yet profound changes that happened during the wait and also during her first year with us. Let me know if it's ok :)

    ReplyDelete
  4. ಕಲ್ಪನೆಯ ಪರಮಾವದಿ (for a guy) :-)

    ReplyDelete