ಮಲಗು ಮಲಗೇ ಓ ಗಗನ ಸಖಿ ...ಹಾರುವ ನಿನಗೂ ಬೇಕು ವಿಶ್ರಾಂತಿ
ಗೂಡು ಕೈ ಬೀಸಿ ಕರೆಯುತಿಹುದು ಬಾ ಬೇಗ...ತುಸು ಹೊತ್ತು ತೆರೆ ಮರೆಗೆ ಸರಿಯಲಿ ನೀ ಮಾಡುತಿರುವ ಕ್ರಾಂತಿ
ಕಣ್ಣ ರೆಪ್ಪೆಗಳು ಸೇರಲು ತವಕ ಪಡುತಿವೆ...ಅವುಗಳ ವಿರಹ ನಿನಗೆ ಕಾಣುತಿಲ್ಲವೇನು?
ನೈಜ ಲೋಕವ ಮರೆತು ಕೆಲವು ಕ್ಷಣ ಸಪ್ನಲೋಕದಲಿ ವಿಹರಿಸುವುದೂ ತಪ್ಪೇನು?
ರವಿಯು ಜಾರಿಹನು ಸಾಗರದ ಆ ತೀರಕೆ...ಇರುಳಲೇಕೆ ನಿನ್ನ ಹಾರಾಟ!
ನಾಳೆ ಎಂಬುದು ಎಂದಿಗೂ ಪ್ರಜ್ವಲಿಸುವುದು...ಜೀವನ ನಗುತಲೆ ಮಾಡಬೇಕಾದ ಹೋರಾಟ :)
ಜೀವನ ನಗುತಲೆ ಮಾಡಬೇಕಾದ ಹೋರಾಟ - brilliant and profound !
ReplyDelete