ನನ್ನ ಭಾವನೆಗಳಿಗೆ ಜೀವ ತುಂಬಿದ ಸಖಿಯ ಭಾವಚಿತ್ರವ ನೀರಿನ ಮೇಲೆ ಬಿಡಿಸುತ ಕುಳಿತೆ,
ಚಿಕ್ಕ ಚಿಕ್ಕ ಅಲೆಗಳ ಮಧ್ಯೆ ಚಿತ್ರವೂ ಮೂಡದೆ ತಿಳಿ ನೀರಿನಲಿ ಅಳಿಸಿಹೊಯಿತೇ,
ಆದರೂ ಮನವು ವ್ಯರ್ಥ ಪ್ರಯತ್ನವ ಮಾಡುತಲೇ ಹೋಯಿತೇ ,
ಸಮಯವೂ ಕಳೆಯಿತು ಅಲೆಗಳು ನಿಂತು ನೀರು ದರ್ಪಣದಂತೆ ಶುಭ್ರವಾಗಿ ನನ್ನ ಪ್ರತಿಬಿಂಬವೇ ನನಗೆ ಕಂಡಿತೆ,
ಈ ಒಂದು ಚಿಕ್ಕ ಘಟನೆಯು ಪ್ರೀತಿಯ ಪರಿಕಲ್ಪನೆಯ ಬಿಡಿಸಿ ಬಿಡಿಸಿ ಹೇಳಿತೆ :)
ಪ್ರೀತಿಯ ಪರಿಕಲ್ಪನೆಯನು ಹುಡುಕುತ ನಾ ನಡೆದು
ReplyDeleteಅಲ್ಲೊಂದು ಕಡೆ, ಇಲ್ಲೊಂದು ಕಡೆ , ಹೊದೆಲ್ಲ ಕಡೆ ಮನ ಮಿಡಿದು ,
ಹೇಳಿತು ಒಂದು ಸಣ್ಣ ದನಿ ಮನದಾಳದಿಂದ ಬಂದು ,
ಹುಡುಕುತಿಹೆ ಏಕೆ ನೀ ಅಲಿಲ್ಲಿ ಎಲ್ಲೆಲ್ಲಿ,
ಅನುಭವಕೆ ಅನುಭವವೇ ವ್ಯಾಖ್ಯಾನ ನೀ ತಿಳಿ !
SuperB!:)..
DeleteAich dattadhu kuda nice poem:))