Friday, August 12, 2011

One Way Traffic!!

ನಿನ್ನ ಇರುವಿಕೆಯ ಬೆಳದಿಂಗಳಲೂ ನಿನ್ನ ಕಳೆದುಕೊಳ್ಳುವ ದುಸ್ವಪ್ನದ ನೆರಳು
ನಿನ್ನ ಅಗಲಿಕೆಯಲೂ ಕಳೆದ ಮಧುರ ಕ್ಷಣಗಳ ಮೆಲುಕು ಹಗಲು ಇರುಳು

ನನ್ನ ಮನದ ದಡದ ಅಲೆಗಳು ನಿನ್ನ ಮನದ ದಡವ ಸೇರದೆ :(...ಸುಮ್ಮನಾದವು ಕಡಲಲೇ
ಆದರೂ ಏಕೋ ದೊಡ್ಡ ಅಲೆಗಳು ಪದೇಪದೇ ಮೂಡಿತು..ಆಕರ್ಷಣೆ ಬೇರೆ ಪ್ರೀತಿ ಬೇರೆ ತಿಳಿದದ್ದು ಆಗಲೇ :)

ಮಧುರ ಭಾವನೆಗಳ ಮೊಗ್ಗು ಪ್ರೀತಿಯ ಹೂವಾಗಿ ಅರಳಿತು ಎಂದು ?
ನಿನ್ನ ಸಾಮಿಪ್ಯವ ಬಯಸಿಹೆನು ಪ್ರತಿ ಉಸಿರಲು ಅಂದು ಇಂದು ಎಂದೆಂದೂ

ಒಂದೇ ದಿಕ್ಕಿನ ಪ್ರೀತಿ ಇದು...ಇಳಿಜಾರಿನ ಜಲಪಾತದಿ ಧುಮ್ಮಿಕ್ಕುವ ನೀರಿನ ಹಾಗೆ
ಮಧ್ಯೆ ತಡೆದು ನಿಲ್ಲಿಸುವ ಆಣೆಕಟ್ಟು ಒಡೆದಿದೆ....ನೆಲಕೆ ಅಪ್ಪಳಿಸಿ ಬಿದ್ದ ಮೇಲೆ ಬದುಕುಳಿವುದು ಹೇಗೆ?

ಉಳಿದರೆ... ನದಿಯಾಗಿ ಹರಿದು ನಿನ್ನ ಪ್ರೀತಿ ಕಡಲ ಸೇರಿ ಬದುಕು...ಇದು ನನ್ನ ಮನದ ಕರಾರು
ಪ್ರೀತಿಯೇ ಸತ್ಯವೆಂದರು...ಸತ್ಯವೇ ದೇವರೆಂದರು...ಅದ ತಡೆಯಲು ನಾ ಯಾರು ನೀ ಯಾರು ?

8 comments:

  1. ಚೆನ್ನಾಗಿದೆ ಗುರು! ಸೂಪರ್ ಕವಿ ಆಗ್ತಾ ಇದ್ದೀಯ ದಿನ ಕಳೆದಂತೆ :)

    ReplyDelete
  2. ಆಹಾ.. ಅಲೆ ಅಲೆಯೂ ಹೊಸದಾಗಿದೆ.. ಆದರೆ ಯಾವ ಅಲೆಯು ಕೊಚ್ಚಿಕೊನ್ಡೊಯ್ಯುವುದೋ ಹೇಳದಾಗಿದೆ !! :)

    ReplyDelete
  3. "ಒಂದೇ ದಿಕ್ಕಿನ ಪ್ರೀತಿ ಇದು...ಇಳಿಜಾರಿನ ಜಲಪಾತದಿ ಧುಮ್ಮಿಕ್ಕುವ ನೀರಿನ ಹಾಗೆ" perfect analogy of 1 way traffic :)

    ಭೂಮಿಯ ಗುರುತ್ವಾಕರ್ಷಣೆ ಇಂದ ನೀರು ಆಕೆಯೆಡೆಗೆ ಧುಮುಕುತ್ತದೆ , ನಿನ್ನ ಅರಸಿಯ ಪ್ರೀತಿಯ ಆಕರ್ಷಣೆ ಇಂದ ನೀನು ಜಲಪಾತದಂತೆ ಧುಮ್ಮುಕ್ಕುತಿರುವೆ :)

    Good one!!

    ReplyDelete
  4. "ಅದ ತಡೆಯಲು ನಾ ಯಾರು ನೀ ಯಾರು.."
    ಪ್ರೀತಿ ಎಂಬ ಮಧುರವಾದ ಸುಳಿಗೆ ಸಿಲುಕಿದ ಮೇಲೆ ಹೊರಬರುವುದು ಅಸಾಧ್ಯ.. ಏನೇ ಬರಲಿ, ಪ್ರೀತಿ ಚಿರಕಾಲ ಉಳಿಯಲಿ..

    I'm touched !

    ReplyDelete
  5. Keerthy:- Nange nin mele full doubt:P.. Spill the bean soon:P.. God bless you!!:).
    Your Imagination is heights!!-sooper!:)

    ReplyDelete