Sunday, January 30, 2011

ಮನದ ಭಾವನೆಗಳ ಬಣ್ಣಿಸಿದ ಬಾನಿನ ಬಣ್ಣಗಳು

ಮುಂಜಾನೆಯ ಮಂಜಲ್ಲಿ ದಿಗಂತದ ಆಚೆ ಎಲ್ಲೋ ತಂಪಾಗಿ ಮಲಗಿದ್ದ ನೇಸರ..
ಕೆಂಪಾಗಿ ಎದ್ದು ಬರಲು ಮನದಲಿ ಹೊಸ ಹುರುಪು ಮರೆಯಾಯಿತು ಬೇಸರ :)

ಪ್ರಜ್ವಲಿಸುತ ಸೂರ್ಯ ನೆತ್ತಿ ಮೇಲೇರಲು ಶುಭ್ರ ನೀಲಿಯಾಯಿತು ಆಗಸ
ಸಾಧನೆಯ ಮೆಟ್ಟಿಲೇರುತ ಮನವು ಹೊರಟಿತು ನನಸು ಮಾಡಲು ಕನಸ !!

ಆಗೊಮ್ಮೆ ಈಗೊಮ್ಮೆ ಕಾರ್ಮೋಡದ ಕಪ್ಪು ಮಾಯೆ !!
ಆಂತರ್ಯದಲಿ ಸೋಲಿನ ಭೀತಿ ದುಃಖ ದುಗುಡದ ಕಹಿ ಛಾಯೆ ..

ಮತ್ತೆ ಆಕಾಶಕೆ ಕೆಂಪು ಓಕಳಿ ಎರಚಿದ ಮುಸ್ಸಂಜೆಯಲಿ ಆದಿತ್ಯ :)
ಆಗುಹೋಗುಗಳ ಅವಲೋಕನದಿ ಸಮಾಧಾನವ ಹುಡುಕುತ ದಿನದ ಅಂತ್ಯ ...

ಇರುಳಾಯಿತು ಬಾನಿನಲಿ ಎಲ್ಲೆಯಿರದ ಕಪ್ಪು ಬೆಳುಪಿನ ಚಿತ್ತಾರ
ಹಳೆ ನೆನಪುಗಳ ಹೊಸ ಕನಸುಗಳ ಪೋಣಿಸುತ ಮನಸು ಮುತ್ತಿನ ಹಾರ :)

17 comments:

  1. Nice one guru :) Liked the way you correlated nature with the humanly world.. Heege geechutta iru

    ReplyDelete
  2. Nice one maga ..very different and more philosophical !! Will discuss on chat ..

    ReplyDelete
  3. nice depiction of state of mind .... just thinking how similar nature is on multiple levels, imagining the same poem with mind compared to various seasons occurring again and again. spring summer fall winter spring :-)

    ReplyDelete
  4. a lot of parallels drawn between nature and life...super...

    ReplyDelete
  5. Loved the poem maga!
    I loved this usage: ಆಂತರ್ಯದಲಿ ಸೋಲಿನ ಭೀತಿ ದುಖ ದುಗುಡದ ಕಹಿ ಛಾಯೆ ..

    Very nicely brought out. Kudos!

    ReplyDelete
  6. rathri aiyithu, kelisuthidheye ninage "raa raa" :-P

    Super stuff kavirathnare!

    ReplyDelete
  7. Thanks a ton guys!! After a long time i wrotes something! Thanks for the encouragement!!

    ReplyDelete
  8. Too good keerthy.

    ಮತ್ತೆ ಆಕಾಶಕೆ ಕೆಂಪು ಓಕಳಿ ಎರಚಿದ ಮುಸ್ಸಂಜೆಯಲಿ ಆದಿತ್ಯ :)
    ಆಗುಹೋಗುಗಳ ಅವಲೋಕನದಿ ಸಮಾಧಾನವ ಹುಡುಕುತ ದಿನದ ಅಂತ್ಯ ...

    idhu thumbaaaa nija :). The poet in you is lovely ...keep writing Keerthy and keep posting.

    ReplyDelete
  9. Very touchin n meaninful...Sooper maga..
    ಹಳೆ ನೆನಪುಗಳ ಹೊಸ ಕನಸುಗಳ ಪೋಣಿಸುತ ಮನಸು ಮುತ್ತಿನ ಹಾರ :) :)

    ReplyDelete
  10. Sakkath poem maga... Amazing intertwining of human life ordeals with daily nature :-)

    Innu jaaaaaaaaasti barita iru :)

    ReplyDelete
  11. "ಹಳೆ ನೆನಪುಗಳ ಹೊಸ ಕನಸುಗಳ ಪೋಣಿಸುತ ಮನಸು ಮುತ್ತಿನ ಹಾರ"

    Beautiful!

    ReplyDelete
  12. wow... such a positive thought.. Good one Keerthy... Loved it :)

    ReplyDelete
  13. "ಹಳೆಯ ನೆನಪುಗಳ ಅಂಗಳದಿ, ಹೊಸ ಕನಸುಗಳ ಪೋನಿಸುತ ಸಾಗುವ ಜೀವನವೇ Colourful !!"
    Adbhutavaagide Keerthy yella saalugalu.. :)

    ReplyDelete
  14. Thanks a lot! Even i loved the last line the most :)

    ReplyDelete