Wednesday, January 20, 2010

Good NIght Sweet dreams

ಮಲಗು ಮಲಗೇ ಓ ಗಗನ ಸಖಿ ...ಹಾರುವ ನಿನಗೂ ಬೇಕು ವಿಶ್ರಾಂತಿ
ಗೂಡು ಕೈ ಬೀಸಿ ಕರೆಯುತಿಹುದು ಬಾ ಬೇಗ...ತುಸು ಹೊತ್ತು ತೆರೆ ಮರೆಗೆ ಸರಿಯಲಿ ನೀ ಮಾಡುತಿರುವ ಕ್ರಾಂತಿ

ಕಣ್ಣ ರೆಪ್ಪೆಗಳು ಸೇರಲು ತವಕ ಪಡುತಿವೆ...ಅವುಗಳ ವಿರಹ ನಿನಗೆ ಕಾಣುತಿಲ್ಲವೇನು?
ನೈಜ ಲೋಕವ ಮರೆತು ಕೆಲವು ಕ್ಷಣ ಸಪ್ನಲೋಕದಲಿ ವಿಹರಿಸುವುದೂ ತಪ್ಪೇನು?

ರವಿಯು ಜಾರಿಹನು ಸಾಗರದ ಆ ತೀರಕೆ...ಇರುಳಲೇಕೆ ನಿನ್ನ ಹಾರಾಟ!
ನಾಳೆ ಎಂಬುದು ಎಂದಿಗೂ ಪ್ರಜ್ವಲಿಸುವುದು...ಜೀವನ ನಗುತಲೆ ಮಾಡಬೇಕಾದ ಹೋರಾಟ :)

Monday, January 18, 2010

!!ಏನು ಇಲ್ಲಾ!! :(

ಪಿಸುಮಾತಲಿ ಏನೋ ಹೇಳ ಬಯಸಿ ನಿನ್ನ ಸನಿಹಕ್ಕೆ ಕರೆದೆ
ಸನಿಹಕೆ ಬರುತ ಬರುತ ಹೂನಗೆಯೊಂದ ನೀ ಬೀರಿದೆ

ಎದೆ ಬಡಿತವು ಜೋರಾಗಿ ಸಿಡಿಲಬ್ಬರವ ಮಾಡಲು
ಆ ನಗೆಯ ಸ್ನಿಗ್ಧತೆಗೆ ನನ್ನ ಉಸಿರಾಟವು ನಿಲ್ಲಲು

ಮೂಕನಾಗಿ ಕಣ್ಣ ಪಿಳುಕಿಸದೆ ನಿನ್ನೇ ದಿಟ್ಟಿಸುತಾ ನಿಂತೆ
ಮನದಾಳದ ಮಾತನು ಎರಡೇ ಕ್ಷಣದಲಿ ಮರೆತೆ!

ಮೆಲುದನಿಯಲಿ ಕುತೂಹಲದಿ "ಏನೋ ಕರೆದಿರಿ?" ಅಂದೆ
ನನಗರಿಯದೆ, ಉಸಿರ ಬಿಗಿ ಹಿಡಿದು, ತೊದಲುತ "ಎ ಎ ಏನು ಇಲ್ಲಾ!" ಅಂದೆ :(

Sunday, January 17, 2010

The WaitT!

ಎನಗೆ ನಿನ್ನ ಮೇಲೆ ಏಕೆ ಅಷ್ಟೊಂದು ಪ್ರೀತಿ
ಒಮ್ಮೆಯೂ ನೋಡಿಲ್ಲ ನಿನ್ನ, ನಿನ್ನ ನೋಡಲು ಕಾಯಲೆಬೇಕಂತು ಪ್ರಕೃತಿ

ಹಗಲಿರುಳು ನಿನ್ನ ಜೊತೆಯಲೇ ಇರುವೆ ಅಪರಿಚಿತರಲ್ಲ ನಾವು
ಸನಿಹವಿದ್ದರು ಮನದಲಿ ಪ್ರಶ್ನೆಗಳು ಹತ್ತು ಹಲವು

ನನ್ನ ಭಾಷೆ ನೀ ತಿಳಿಯೆ ನಿನ್ನ ಭಾಷೆ ನಾ ಅರಿಯೆ ಆದರೂ ಅರ್ಥವಾಗುತಿಹುದು ಎಲ್ಲವೂ
ದಿನ ಕಳೆದಂತೆ ಹೆಚ್ಚುತಿಹುದು ಪ್ರೀತಿ......... ಕಾಡುತಿಹುದು ಕಾತುರವು

ನನ್ನ ಕನಸಿನ ಅರಮನೆಯ ಬೆಳಗಿತು ನಿನ್ನ ಮುಗ್ಧ ಕಿರುನಗೆಯ ಕಲ್ಪನೆ
ನಿನಗೂ ನನ್ನ ಮೇಲೆ ಪ್ರೀತಿ ಹೆಚ್ಚಾಗಲು... ಹಿತವಾಗಿ ಸ್ಪರ್ಶಿಸುವೆ ಮೆಲ್ಲನೆ

ಅಷ್ಟು ಬೇಗನೆ ಎಂತಹ ಭಾವನಾತ್ಮಕ ಬಂಧ ....ಈ ಸಂಬಂಧವೇ ಅಚ್ಚರಿ !!
ನಾ ನಿನಗೆ ಜನ್ಮ ಕೊದುತಿರುವೆ ಅಷ್ಟೇ... ನೀ ಕೊಡುತಿರುವ ಉಡುಗೊರೆ ನನ್ನ ತಾಯ್ತನದ ಸಿರಿ :)

"ಮರೆವು ಕೂಡ ನಿನ್ನ ಮರೆಯಲು ಮರೆಯುವುದೋ ಏನೋ"

ನೆನಪಿನಂಗಳದಿ ನಡೆಯುತ ಚಿಕ್ಕ ಚಿಕ್ಕ ಕನಸುಗಳ ಒಂದೊಂದಾಗಿ ಸಂಗ್ರಹಿಸಿ
ಪ್ರೀತಿಯೇ ಸತ್ಯವೆಂದು ಕಾದಿಹೆನು ನಿನಗಾಗಿ ನನ್ನ ಹೃದಯವನು ಕಾಯ್ದಿರಿಸಿ

ವಿಧಿಯಾಟವೋ ಜೀವನದ ಪಾಠವೋ ದೂರಾಗುತಿರುವೆ ನೀನು
ಮರೆವು ಕೂಡ ನಿನ್ನ ಮರೆಯಲು ಮರೆಯುವುದೋ ಏನೋ

ನಾ ನಡೆದ ಹಾದಿ ಬೇರೆ ನೀ ಬಂದ ದಾರಿ ಬೇರೆ ಕನಸೆeತಕೆ ಒಂದೇ.. ಕನಸುಗಳೇಕೆ ಹೀಗೆ
ಹುಸಿನಗೆಯೋ ಮುಗುಳ್ನಗೆಯೋ ನಾನರಿಯೆ....ಆದರೂ ನಗುತಿರುವೆ ಸುಮ್ಮನೆ ಹಾಗೆ

ಭೋರ್ಗರೆಯುವ ಭಾವನೆಗಳ ಕಡಲಾಗಿಹುದು ಮನಸು... ಅದ ತಡೆಯಲು ನೀ ಇಲ್ಲ ಎಂಬುದೇ ದುರಂತ
ಉಸಿರಾಡುತಿದೆ ಮನದ ಮೂಲೆಯಲಿ ಎಲ್ಲೋ...ನಿನ್ನ ಸೇರುವ ಕನಸು ಇಂದಿಗೂ ಜೀವಂತ :)