Sunday, April 8, 2012

ಪ್ರೀತಿಯ ಪರಿಕಲ್ಪನೆ

ನನ್ನ ಭಾವನೆಗಳಿಗೆ ಜೀವ ತುಂಬಿದ ಸಖಿಯ ಭಾವಚಿತ್ರವ ನೀರಿನ ಮೇಲೆ ಬಿಡಿಸುತ ಕುಳಿತೆ,
ಚಿಕ್ಕ ಚಿಕ್ಕ ಅಲೆಗಳ ಮಧ್ಯೆ ಚಿತ್ರವೂ ಮೂಡದೆ ತಿಳಿ ನೀರಿನಲಿ ಅಳಿಸಿಹೊಯಿತೇ,
ಆದರೂ ಮನವು ವ್ಯರ್ಥ ಪ್ರಯತ್ನವ ಮಾಡುತಲೇ ಹೋಯಿತೇ ,
ಸಮಯವೂ ಕಳೆಯಿತು ಅಲೆಗಳು ನಿಂತು ನೀರು ದರ್ಪಣದಂತೆ ಶುಭ್ರವಾಗಿ ನನ್ನ ಪ್ರತಿಬಿಂಬವೇ ನನಗೆ ಕಂಡಿತೆ,
ಈ ಒಂದು ಚಿಕ್ಕ ಘಟನೆಯು ಪ್ರೀತಿಯ ಪರಿಕಲ್ಪನೆಯ ಬಿಡಿಸಿ ಬಿಡಿಸಿ ಹೇಳಿತೆ :)

Friday, August 12, 2011

One Way Traffic!!

ನಿನ್ನ ಇರುವಿಕೆಯ ಬೆಳದಿಂಗಳಲೂ ನಿನ್ನ ಕಳೆದುಕೊಳ್ಳುವ ದುಸ್ವಪ್ನದ ನೆರಳು
ನಿನ್ನ ಅಗಲಿಕೆಯಲೂ ಕಳೆದ ಮಧುರ ಕ್ಷಣಗಳ ಮೆಲುಕು ಹಗಲು ಇರುಳು

ನನ್ನ ಮನದ ದಡದ ಅಲೆಗಳು ನಿನ್ನ ಮನದ ದಡವ ಸೇರದೆ :(...ಸುಮ್ಮನಾದವು ಕಡಲಲೇ
ಆದರೂ ಏಕೋ ದೊಡ್ಡ ಅಲೆಗಳು ಪದೇಪದೇ ಮೂಡಿತು..ಆಕರ್ಷಣೆ ಬೇರೆ ಪ್ರೀತಿ ಬೇರೆ ತಿಳಿದದ್ದು ಆಗಲೇ :)

ಮಧುರ ಭಾವನೆಗಳ ಮೊಗ್ಗು ಪ್ರೀತಿಯ ಹೂವಾಗಿ ಅರಳಿತು ಎಂದು ?
ನಿನ್ನ ಸಾಮಿಪ್ಯವ ಬಯಸಿಹೆನು ಪ್ರತಿ ಉಸಿರಲು ಅಂದು ಇಂದು ಎಂದೆಂದೂ

ಒಂದೇ ದಿಕ್ಕಿನ ಪ್ರೀತಿ ಇದು...ಇಳಿಜಾರಿನ ಜಲಪಾತದಿ ಧುಮ್ಮಿಕ್ಕುವ ನೀರಿನ ಹಾಗೆ
ಮಧ್ಯೆ ತಡೆದು ನಿಲ್ಲಿಸುವ ಆಣೆಕಟ್ಟು ಒಡೆದಿದೆ....ನೆಲಕೆ ಅಪ್ಪಳಿಸಿ ಬಿದ್ದ ಮೇಲೆ ಬದುಕುಳಿವುದು ಹೇಗೆ?

ಉಳಿದರೆ... ನದಿಯಾಗಿ ಹರಿದು ನಿನ್ನ ಪ್ರೀತಿ ಕಡಲ ಸೇರಿ ಬದುಕು...ಇದು ನನ್ನ ಮನದ ಕರಾರು
ಪ್ರೀತಿಯೇ ಸತ್ಯವೆಂದರು...ಸತ್ಯವೇ ದೇವರೆಂದರು...ಅದ ತಡೆಯಲು ನಾ ಯಾರು ನೀ ಯಾರು ?

Wednesday, July 20, 2011

Swalpa philosophy Swalpa Kavya!

ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು , ಕವಿಯೊಬ್ಬ ಹಾಡಿದನು ಮಣ್ಣೆಲ್ಲ ಹೊನ್ನು
ವೆದಾಂತಿಯು ನಾನೇ ಕವಿಯು ನಾನೇ ಬದಲಾದದ್ದು ಮನದ ಆಂತರಿಕ ಕಣ್ಣು

ಹೆಣ್ಣು ಹೊನ್ನು ಮಣ್ಣು ಇವುಗಳ ಅನುಭವಿಸದೇ ಸಿಗುವುದೆಂತಹ ಮೋಕ್ಷ ?
ಕಾಣದ ಸುಖವ ಬಿಡುವುದರಲ್ಲೇನಿದೆ, ಎಲ್ಲವ ಕಂಡು ತ್ಯಜಿಸುವುದು ಲಕ್ಷ್ಯ

ಭಾವನೆಗಳ ತುಳಿದು ಭವ ಬಂಧನದೊಳು ಸಿಲುಕದೆ ದೇವರ ನೆನೆವುದೇ ಆಧ್ಯಾತ್ಮ?
ನಿತ್ಯ ಕಾಯಕವ ಮಾಡಿ ಪರರ ಸುಖದುಃಖಗಳಲ್ಲಿ ಭಾಗಿಯಾದೊಡೆ ಮೆಚ್ಚದಿರುವನೇ ಪರಮಾತ್ಮ?

Friday, April 22, 2011

ಭಾವನೆಗಳ ನಡುವೆ "Practical" ಮನಸು.........

ಇಳೆಯು ಗುಂಡಾಗಿದೆ ಕಳೆದು ಹೋಗುವ ಭಯವೆeತಕೆ ..............

ಆದಿ ಅಂತ್ಯ ತಿಳಿದಿಲ್ಲ ಹೊರಟಿರುವ ನೀ ಎಲ್ಲಿಗೆ ?

ದಾರಿ ಯಾವುದಾದರೇನು ಸವಿಯುತ ಪಯಣವ ಸಾಗು ನೀ ಮೆಲ್ಲಗೆ,

ಏಕಾಂಗಿ ಸಂಚಾರಿಯಲ್ಲ ಸಿಗುವರು ಸಹಪಯಣಿಗರು ನಿನ್ನ ಜೊತೆಗೆ....

ಆದರು ಮನವೇ ಕೇಳು ಯಾರ ಜೊತೆಯೂ ಬೇಡ ಅತಿಯಾದ ಸಲಿಗೆ!

ಸಿಲುಕದಿರು ಭಾವನೆಗಳ ಈಜಲಾಗದ ಸುಳಿಗೆ!

Sunday, January 30, 2011

ಮನದ ಭಾವನೆಗಳ ಬಣ್ಣಿಸಿದ ಬಾನಿನ ಬಣ್ಣಗಳು

ಮುಂಜಾನೆಯ ಮಂಜಲ್ಲಿ ದಿಗಂತದ ಆಚೆ ಎಲ್ಲೋ ತಂಪಾಗಿ ಮಲಗಿದ್ದ ನೇಸರ..
ಕೆಂಪಾಗಿ ಎದ್ದು ಬರಲು ಮನದಲಿ ಹೊಸ ಹುರುಪು ಮರೆಯಾಯಿತು ಬೇಸರ :)

ಪ್ರಜ್ವಲಿಸುತ ಸೂರ್ಯ ನೆತ್ತಿ ಮೇಲೇರಲು ಶುಭ್ರ ನೀಲಿಯಾಯಿತು ಆಗಸ
ಸಾಧನೆಯ ಮೆಟ್ಟಿಲೇರುತ ಮನವು ಹೊರಟಿತು ನನಸು ಮಾಡಲು ಕನಸ !!

ಆಗೊಮ್ಮೆ ಈಗೊಮ್ಮೆ ಕಾರ್ಮೋಡದ ಕಪ್ಪು ಮಾಯೆ !!
ಆಂತರ್ಯದಲಿ ಸೋಲಿನ ಭೀತಿ ದುಃಖ ದುಗುಡದ ಕಹಿ ಛಾಯೆ ..

ಮತ್ತೆ ಆಕಾಶಕೆ ಕೆಂಪು ಓಕಳಿ ಎರಚಿದ ಮುಸ್ಸಂಜೆಯಲಿ ಆದಿತ್ಯ :)
ಆಗುಹೋಗುಗಳ ಅವಲೋಕನದಿ ಸಮಾಧಾನವ ಹುಡುಕುತ ದಿನದ ಅಂತ್ಯ ...

ಇರುಳಾಯಿತು ಬಾನಿನಲಿ ಎಲ್ಲೆಯಿರದ ಕಪ್ಪು ಬೆಳುಪಿನ ಚಿತ್ತಾರ
ಹಳೆ ನೆನಪುಗಳ ಹೊಸ ಕನಸುಗಳ ಪೋಣಿಸುತ ಮನಸು ಮುತ್ತಿನ ಹಾರ :)

Sunday, October 10, 2010

ಅಮ್ಮ ....

ನಿನ್ನ ಕಣ್ಣ ಬೆಳಕೇ ನನಗೆ ದಾರಿದೀಪ ,
ಕಷ್ಟಗಳ ಸಮುದ್ರದಲ್ಲಿ ಈಜುತ್ತಿರುವಾಗ ನೀನಾದೆ ದ್ವೀಪ ;

ನಿಸರ್ಗವೇ ನಿನ್ನಯ ಪ್ರತಿಬಿಂಬ ,
ನಮ್ಮ ಕುಟುಂಬಕ್ಕೆ ನೀನೆ ಆಧಾರ ಸ್ಥಂಭ ;

ಈ ಜನ್ಮ ನೀ ಕೊಟ್ಟ ಭಿಕ್ಷೆ ,
ನಿನ್ನ ಪ್ರತಿಯೊಂದು ಮಾತು ನನಗೆ ದೀಕ್ಷೆ ;

ನೀನೆ ನನ್ನ ಮೊದಲ ಗುರು ಅತ್ಯುತ್ತಮ ಸ್ನೇಹಿತೆ ,
ಕೋಪದಲ್ಲೂ ಪ್ರೀತಿ ತೋರೋ ನೀನೊಬ್ಬಳು ದೇವತೆ ;

ನನ್ನನ್ನು ಮನುಷ್ಯನನ್ನಾಗಿ ರೂಪಿಸಿದ ಶಿಲ್ಪಿ ನೀನು ,
ಅದಕ್ಕೆ ಎಂದೆಂದೂ ಚಿರ ಋಣಿ ನಾನು ನಾನು ನಾನು ......:)

Wednesday, October 6, 2010

ಎರಡು ಕವನ

----------------------------------------------------------------------------------------------------------------------------------------------------
ಯುಗ ಯುಗ ಕಳೆದ ನಂತರ ಎರಡು ಜೀವಗಳ ಮಿಲನ.....
ಮೊದಮೊದಲ ಭೇಟಿಯ ಆತುರ ಕಾತರ ತಲ್ಲಣ :P
ಇಬ್ಬರೂ ಹಾಗೆ ಇದ್ದರು ಬದಲಾಗಿದ್ದು ಜೀವನ :)
ಮನದೊಳಗೆ ಮನಸೋ ಇಚ್ಛೆ ಹುಟ್ಟುವ ಕಲ್ಪನೆಗಳ ಹಗರಣ :ಪ
ಹಣೆಬರಹದ ಎದುರು ಹುಚ್ಚು ಪ್ರೇಮದ ಕದನ !!!
ಪ್ರೇಯಸಿಯ ಕಂಡ ಪ್ರಿಯಕರನಿಗೆ ಎಲ್ಲಿಲ್ಲದ ರೋಮಾಂಚನ....
ಕಣ್ಣೀರು ಆನಂದ ಭಾಷ್ಪಗಳ ಸಮ್ಮಿಲನ....
ವಿರಹದ ಬೇಯ್ಗೆಯಲಿ ಬೆಂದ ಜೀವಗಳ ತಣಿಸಿತು ಆಲಿಂಗನ .....
ವಿಧಿಯ ಮೂಕವಾಗಿಸಿತು ಮುಗ್ಧ ಪ್ರೀತಿಯ ನರ್ತನ!! :)


--------------------------------------------------------------------------------------------------

ಯುಗ ಯುಗ ಕಳೆದ ನಂತರ ಎರಡು ಜೀವಗಳ ಮಿಲನ.....
ಮೊದಮೊದಲ ಭೇಟಿಯ ಆತುರ ಕಾತರ ತಲ್ಲಣ :P
ಇಬ್ಬರೂ ಹಾಗೆ ಇದ್ದರು ಬದಲಾಗಿದ್ದು ಜೀವನ :)
ಮನದೊಳಗೆ ಮನಸೋ ಇಚ್ಛೆ ಹುಟ್ಟುವ ಕಲ್ಪನೆಗಳ ಹಗರಣ :ಪ
ಹಣೆಬರಹದ ಎದುರು ಹುಚ್ಚು ಪ್ರೇಮದ ಕದನ !!!
ಪ್ರೇಯಸಿಯ ಕಂಡ ಪ್ರಿಯಕರನಿಗೆ ಎಲ್ಲಿಲ್ಲದ ರೋಮಾಂಚನ....
ಉದ್ವೇಗದಿ ನಡುರಸ್ತೆಯ್ಲೇ ಜಗವ ಮರೆಸಿದ ಆಲಿಂಗನ ........................................:P :)
ದೀಪವು ಹಸಿರಾಗಲು ಇಬ್ಬರ ನೆಲಕ್ಕುರುಳಿಸಿತು ಏನು ಅರಿಯದ ವಾಹನ !!!!!!!!!!!!!!!!!!!!!!!!!

ಅವಸರವೇ ಅಪಘಾತಕ್ಕೆ ಕಾರಣ ಅವಸರವೇ ಅಪಘಾತಕ್ಕೆ ಕಾರಣ !!!!!!!!!!!
--------------------------------------------------------------------------------------------------